 ಮೂಲದೊಡನೆ ಪರಿಶೀಲಿಸಿ
ಕುಂಭಕಲಾತಂತ್ರ

ವಿಜ್ಞಾನ ಮತ್ತು ಎಂಜಿನಿಯರಿಂಗಿನಿಂದ ಲಭಿಸಿದ ಫಲಿತಾಂಶಗಳನ್ನು ಪ್ರಯೋಗಿಸಿ ಅಲೋಹನಿರವಯವ ಮೃತ್ತಿಕೆಗಳಿಂದ ಉಪಯುಕ್ತ ಪದಾರ್ಥಗಳ ನಿರ್ಮಾಣ (ಸಿರ್ಯಾಮಿಕ್ ಟೆಕ್ನಾಲಜಿ). ಈ ತಂತ್ರ ಸಿಲಿಕೇಟ್ ಉದ್ಯಮದ ಅಂಗ. ಆ ಉದ್ಯಮದ ಪ್ರಧಾನ ಘಟಕಗಳನ್ನು ಮುಂದಿನ ಪುಟದ ಕೊನೆಯಲ್ಲಿ ಬರೆದಿರುವ ಯಾದಿ ತೋರಿಸುತ್ತದೆ.

 ಕುಂಭಕಲಾ ಉದ್ಯಮದಲ್ಲಿ ತಯಾರಾಗುವ ವಸ್ತುಗಳನ್ನು ಅವಲಂಬಿಸಿ ಅವುಗಳಲ್ಲಿ ಏಳು ಮುಖ್ಯ ವಿಭಾಗಗಳಿವೆ.

 1 ಕಿಡಿಬೆಣೆಗಳಿಗೆ ಉಪಯೋಗಿಸುವ ಕಾಚೀಕೃತ (ವಿಟ್ರಿಫೈಡ್) ಛಿಧ್ರಿತ ಅಲ್ಯುಮಿನಿಯದ ಕವಚ. ಇದನ್ನು ಸಾಮಾನ್ಯವಾಗಿ 1600-1700 ಸೆಂ. ಉಷ್ಣತೆಯಲ್ಲಿ ಸುಡುತ್ತಾರೆ. ಇದರ ದಗ್ಧವಿಚ್ಚೇದನ ಮಾಡ್ಯುಲಸ್ (ಫೈಯರ್ಡ್‍ಮಾಡ್ಯುಲಸ್ ಆಫ್ ರಪ್ಚರ್) 30,000-40,000 ಪಿಎಸ್‍ಐ (ಚದರ ಇಂಚಿಗೆ ಪೌಂಡುಗಳು) ವರೆಗೆ ಇದೆ. ಇದನ್ನು ಸರಂಧ್ರತಾ ಪರೀಕ್ಷೆಗೆ (ಪೊರೋಸಿಟಿ ಟೆಸ್ಟ್) ಒಡ್ಡಿದಾಗ ಇದು 24 ಗಂಟೆಗಳ ಪರ್ಯಂತ ಆ  ಆಲ್ಕೊಹಾಲಿಕ್ ಪುಕ್ಸಿನ್ ದ್ರಾವಣದಲ್ಲಿ ಬಿಎಸ್‍ಎಸ್ (ಬ್ರಿಟಿಷ್ ಸ್ಟಾಂಡರ್ಡ್ ಸ್ಪೆಸಿಫಿಕೇಷನ್) ಪ್ರಕಾರ ಸುಮಾರು 10,000 ಕೆಜಿಗಳ ಒತ್ತಡವನ್ನು ತಡೆದುಕೊಳ್ಳುವಂತಿರಬೇಕು.

 2. ಇನ್ನೊಂದು ತರಹದ ಕುಂಭಕಲೆಯ ವಸ್ತುವನ್ನು ಕೈನೈಟಿನಿಂದ ತಯಾರಿಸುತ್ತಾರೆ. ಇದನ್ನು ಸಹ ಕಾಚೀಕರಿಸಿ ಕಿಡಿಬೆಣೆ ಮುಂತಾದವುಗಳ ನಿರ್ಮಾಣದಲ್ಲಿ ಬಳಸುವರು. ಮೇಲೆ ಹೇಳಿದ ಸರಂಧ್ರತಾ ಪರೀಕ್ಷೆಯನ್ನು ಈ ವಸ್ತು ಸಹ ತಡೆದುಕೊಳ್ಳಬೇಕಾಗುತ್ತದೆ. ಇದನ್ನು ಸುಡುವ ಉಷ್ಣತೆ ಸಾಧಾರಣವಾಗಿ 1500-1600 ಸೆಂ.

 3. ಶ್ವೇತ ಸಾಮಗ್ರಿ (ವೈಟ್ ವೇರ್): ಸುಟ್ಟ ಬಳಿಕ ವಸ್ತುಗಳ ಬಣ್ಣ ಸಾಮಾನ್ಯವಾಗಿ ಬಿಳಿ, ಉಚ್ಚ ಮತ್ತು ನಿಮ್ನ ಕರ್ಷಣ ಪಿಂಗಾಣಿ ವಿದ್ಯುನ್ನಿರೋಧಕಗಳು ಮೃದು (1300 ಸೆಂ.) ಮತ್ತು ಕಠಿಣ (1410 ಸೆಂ.). ಪಿಂಗಾಣಿ ಸಾಮಾನುಗಳು, ದಿನಬಳಕೆಯ ಪಿಂಗಾಣಿ ಜಾಡಿಗಳು, ಪಾಕೀಜು ಪಾತ್ರೆಗಳು, ಮೂಳೆ ಚೈನ ಮತ್ತು ದಂತಪಿಂಗಾಣಿ ಈ ವಿಭಾಗದವು. ಕಾಚೀಕೃತವಾದ ತರುವಾಯ ಮೃದು ಪಿಂಗಾಣಿ ವಸ್ತುಗಳನ್ನು ಸುಮಾರು 1300 ಸೆಂ. ಉಷ್ಣತೆಯಲ್ಲಿಯೂ ಕಠಿಣ ಪಿಂಗಾಣಿ ವಸ್ತುಗಳನ್ನು ಸುಮಾರು 1410 ಸೆಂ. ಉಷ್ಣತೆಯಲ್ಲೂ ಸುಡುತ್ತಾರೆ. ಪ್ರಯೋಗಮಂದಿರದಲ್ಲಿ ಉಪಯೋಗಿಸುವ ಕ್ರೂಸಿಬಲ್ಲುಗಳೇ ಮೊದಲಾದ ವಸ್ತುಗಳನ್ನು ಸುಡುವ ಉಷ್ಣತೆ 14100ಸೆಂ. ಕಾಚೀಕೃತ ಮತ್ತು ಅರ್ಧಕಾಚೀಕೃತ ಪಾಕೀಜು ಪಾತ್ರೆಗಳನ್ನು 1250-1350 ಸೆಂ. ಉಷ್ಣತೆಯಲ್ಲಿ ಸುಡುತ್ತಾರೆ. ದಂತ ಪಿಂಗಾಣಿಯೂ ಕಾಚೀಕೃತವೇ. ಅದನ್ನು ಸುಡುವ ಉಷ್ಣತೆ 1200-1250 ಸೆಂ. ಉಚ್ಚ ಹಾಗೂ ನಿಮ್ಮಕರ್ಷಣ ಪಿಂಗಾಣಿ ವಿದ್ಯುನ್ನಿರೋಧಕಗಳು ಈ ಮೊದಲೇ (1) ರಲ್ಲಿ ಹೇಳಿರುವ ಸರಂಧ್ರತಾ ಪರೀಕ್ಷೆಯಲ್ಲಿ ಸಹ ಉತ್ತೀರ್ಣವಾಗಬೇಕು.

 4 ತಾಪಧಾರಕಗಳು (ರಿಫ್ರ್ಯಾಕ್ಟರೀಸ್): ಕುಲುಮೆಗಳಲ್ಲಿ ಇವುಗಳ ವಿಶೇಷ ಬಳಕೆಯುಂಟು. ಉಷ್ಣನಿರೋಧ (ಹೀಟ್ ಇನ್ಸುಲೇಷನ್) ಬೇಕಾದ ಎಲ್ಲ ಉದ್ಯಮಗಳಲ್ಲಿ ತಾಪಧಾರಕಗಳು ಅವಿಭಾಜ್ಯ ಅಂಗಗಳು. ಇವುಗಳ ಬಹುತೇಕ ತಾಪಧಾರಕಗಳು ಸರಂಧ್ರವಸ್ತುಗಳು. ಅವುಗಳ ದಗದ ಉಷ್ಣತೆಯ ವ್ಯಾಪ್ತಿ 1300-1650 ಸೆಂ. 

 5. ಕಲ್ಲುಮಡಕೆ ಕುಡಿಕೆಗಳು (ಸ್ಟೋನ್‍ವೇರ್): ಕಾಚೀಕೃತ ಹಾಗೂ ಅರ್ಧ ಕಾಚೀಕೃತ ರಾಸಾಯನಿಕ ಜಾಡಿಗಳು ಮತ್ತು ಪಾಕೀಜು ವಸ್ತುಗಳು ಈ ವಿಭಾಗದವು. ಇವೆಲ್ಲವೂ ಸಾಮಾನ್ಯವಾಗಿ ಸರಂಧ್ರಗಳು. ಇವುಗಳ ಬಣ್ಣ ಬಿಳಿಯಲ್ಲ. ದಗ್ಧ ಉಷ್ಣತೆಯ ವ್ಯಾಪ್ತಿ 1200-1300 ಸೆಂ.

 6. ಪಾಕೀಜು ಪಾತ್ರೆಗಳು. ದಿನಬಳಕೆಯ ಪಿಂಗಾಣಿ ವಸ್ತುಗಳು ಮುಂತಾದ ಮೃದ್ವಸ್ತುಗಳು: ಇವು ಸರಂಧ್ರವಾಗಿವೆ. ಬಣ್ಣ ಬಿಳಿಯಲ್ಲ. ದಗ್ಧ ಉಷ್ಣತೆಯ ವ್ಯಾಪ್ತಿ 1200-1250 ಸೆಂ.

 7. ಟೆರಕೋಟ ಮತ್ತು ಮಜೋಲಿಕ ವಸ್ತುಗಳು: ದಿನಬಳಕೆಯ ಪಿಂಗಾಣಿ ಪಾತ್ರೆಗಳು. ಮೃತ್ಪ್ರತಿಮೆಗಳು, ಕಲಾವಸ್ತುಗಳು ಇವುಗಳಲ್ಲಿ ಸೇರಿವೆ. ಇವುಗಳ ಬಣ್ಣ ಸಾಮಾನ್ಯವಾಗಿ ಬಿಳಿಯಲ್ಲ. ಇವು ಕಾಚೀಕೃತವಾಗಿರಬಹುದು, ಅರ್ಧ ಕಾಚೀಕೃತವಾಗಿರಬಹುದು ಮತ್ತು ಸರಂಧ್ರವಾಗಿರಬಹುದು. ಕೆಲವು ವೇಳೆ ಈ ಸಾಮಗ್ರಿಗಳನ್ನು ಗಾಜಿನಂತೆ ಮಾಡಿ ಕೆಲವು ವೇಳೆ ನುಣುಪು ಮಾಡದೆ 600-1000 ಸೆಂ. ಉಷ್ಣತೆಯಲ್ಲಿ ಸುಡುತ್ತಾರೆ.

 ಮೇಲಿನ ವಿವರಣೆಯಿಂದ ಕುಂಭಕಲಾ ಉದ್ಯಮದಲ್ಲಿ ಕಾಚೀಕರಣ ಹಾಗೂ ದಗ್ಧ ಉಷ್ಣತಾಮಾನಗಳ ಪ್ರಾಧಾನ್ಯದ ಅರಿವಾಗುತ್ತದೆ.

 ಕಾಚೀಕರಣ: ಒಂದು ಕುಂಭ ಕಲಾವಸ್ತುವನ್ನು ಉಷ್ಣಸಂಸ್ಕರಣೆಗೆ ಒಳಪಡಿಸಿ ಅದರ ಸರಂಧ್ರತೆಯನ್ನು ಕ್ರಮೇಣ ಕಡಿಮೆಮಾಡುವಿಕೆ (ವಿಟ್ರಿಫಿಕೇಶನ್). ಇದರ ಐದು ವಿವಿಧ ಮಟ್ಟಗಳನ್ನು ಮುಂದೆ ಬರೆದಿದೆ.

 1 ಅಭೇದ್ಯ (ಇಂಪರ್ವಿಯಸ್): ಆಲ್ಕೊಹಾಲಿನಲ್ಲಿ ಕರಗಿಸಿದ 0.1% ಪುಕ್ಸಿನ್ ಬಣ್ಣದಲ್ಲಿ ಕಂಭ ಕಲಾವಸ್ತುವನ್ನು 15 ಗಂಟಿಗಳ ಕಾಲ 4,000 ಪಿ.ಎಸ್.ಐ ಒತ್ತಡದಲ್ಲಿ ಶಿಷ್ಟಪರೀಕ್ಷೆಯಲ್ಲಿ ( ಎ.ಎಸ್.ಟಿ.ಎಂ.ಡಿ-116-44) ನೆನೆಹಾಕಿ ಅದರ ಹೀರಿಕೆ ಶೂನ್ಯವಾದಾಗ ಆ ವಸ್ತು ಅಭೇದ್ಯವೆನ್ನಿಸುತ್ತದೆ.

 2 ಕಾಚೀಕೃತ (ವಿಟ್ರಿಯಸ್): ಶಿಷ್ಟ ಪರೀಕ್ಷೆಯಲ್ಲಿ (ಎ.ಎಸ್.ಟಿ.ಎಂ.ಸಿ0242-ಣoಖಿ) 0.5% ಹೆಚ್ಚಿನ ಮಟ್ಟದವರೆಗೆ ನೀರನ್ನು ಹೀರಿಕೊಳ್ಳುವಿಕೆ.

 3  ಉಪಕಾಚೀಕೃತ (ನಿಯರ್ ವಿಟ್ರಿಯಸ್): ಶಿಷ್ಟ ಪರೀಕ್ಷೆಯಲ್ಲಿ (ಎ.ಎಸ್.ಟಿ.ಎಂ.ಸಿ-242-50ಖಿ) 0.5%-3% ವರೆಗೆ ನೀರನ್ನು ಹೀರಿಕೊಳ್ಳುವಿಕೆ.

 4  ಅರ್ಧಕಾಚೀಕೃತ (ಸೆಮಿವಿಟ್ರಿಯಸ್): ಶಿಷ್ಟಪರೀಕ್ಷೆಯಲ್ಲಿ (ಎ.ಎಸ್.ಟಿ.ಎಂ.ಸಿ-242-50ಖಿ) 3%-10% ರ ವರೆಗೆ ನೀರನ್ನು ಹೀರಿಕೊಳ್ಳುವಿಕೆ.

 5  ಅಕಾಚೀಕೃತ (ನಾನ್ ವಿಟ್ರಿಯಸ್): ಶಿಷ್ಟಪರೀಕ್ಷೆಯಲ್ಲಿ (ಎ.ಎಸ್.ಟಿ.ಎಂ.ಸಿ-242-50ಖಿ) 10% ಹೆಚ್ಚಿನ ಬನಿ ಭಾಗ ನೀರನ್ನು ಹೀರಿಕೊಳ್ಳುವಿಕೆ.

 ಹೆಚ್ಚಿನ ಕುಂಭಕಲಾವಸ್ತುಗಳನ್ನು ಸಾಮಾನ್ಯವಾಗಿ ಈ ಕೆಳಗೆ ಕಾಣಿಸುವ ವಿಧಾನದಲ್ಲಿ ತಯಾರಿಸುತ್ತಾರೆ. 1 ಒದ್ದೆ ವಿಧಾನ, 2 ಎರಕ ಹುಯ್ಯುವುದು (ಕ್ಯಾಸ್ಟಿಂಗ್) 3 ಒಣಒತ್ತಡ (ಡ್ರೈ ಪ್ರಸ್ಸಿಂಗ್) ವಿಧಾನ.

 1 ಒದ್ದೆ ವಿಧಾನ: ಇದರಲ್ಲಿ ಅನುಸರಿಸುವ ಎರಡು ಕ್ರಮಗಳು ಹೀಗಿವೆ. (i) ಬಿಸಿಮಾಡಿದ ಮುದ್ದೆಯನ್ನು ಅಮುಕುವುದು (ಹಾಟ್ ಪ್ಲಾಸ್ಟಿಕ್ ಪ್ರೆಸ್ಸಿಂಗ್). ಇದರಲ್ಲಿ ಗಾಳಿ ತೆಗೆದ ಮತ್ತು ಗಾಳಿಯನ್ನು ತೆಗೆಯದೆ ಇರುವ ಮುದ್ದೆಗಳನ್ನು ಉಚ್ಚಕರ್ಷಣ ವಿದ್ಯುನ್ನಿರೋಧ ವಸ್ತುಗಳ ತಯಾರಿಕೆಗಾಗಿ ಉಪಯೋಗಿಸುತ್ತಾರೆ. ಗಾಳಿ ತೆಗೆದ ಮಣ್ಣು ಮುದ್ದೆಯನ್ನು ಉಪಯೋಗಿಸುವುದರಿಂದ ಆ ಕಾಯಗಳ ಛೇದ ವೋಲ್ಟೇಜ್ (ಪಂಕ್ಚರ್‍ವೋಲ್ಟೇಜ್) ಮತ್ತು ಯಾಂತ್ರಿಕ ಸಾಮಥ್ರ್ಯ ಹೆಚ್ಚುತ್ತವೆ ಎಂದು ಗೊತ್ತಾಗಿದೆ. ಈ ವಿಧಾನದಿಂದ ಉತ್ಪನ್ನ ಶೀಘ್ರವಾಗಿ ಆಗುವುದು. ಅಲ್ಲದೇ ಆ ಉತ್ಪನ್ನಗಳ ಗಾತ್ರಗಳು ± 3% ಪರಿಮಿತಿಗಳಲ್ಲಿ ಇರುತ್ತದೆ. ಉಚ್ಚಕರ್ಷಣ ವಿದ್ಯನ್ನಿರೋಧಕಗಳಲ್ಲಿ ವಿಚ್ಛೇದನ ಮಾಡ್ಯುಲಸ್ (ಮಾಡ್ಯುಲಸ್ ಆಫ್ ರಪ್ಚರ್) 12,000 ಪಿ.ಎಸ್.ಐ. ಗಳಿಗಿಂತ ಹೆಚ್ಚಾಗಿರಬೇಕು ಮತ್ತು ಛೇದ ವೋಲ್ಟೇಜ್ ಒಂದು ದಶಲಕ್ಷಕ್ಕೆ 200 ಮತ್ತು 250 ವೋಲ್ಟುಗಳ ನಡುವೆ ಇರಬೇಕು (ii) ಎರಡನೆಯದು ಕುಂಬಾರ

 

ಸಿಲಿಕೇಟ್ ಉದ್ಯಮ

 

|

ಕುಂಭಕಲೆ

|

Uಜ

  

|

ಸಿಮೆಂಟ್

|

Uಜುಲೇಪನ

|

ತಾಪzsgPಗಳು (ರಿಫ್ರ್ಯಕ್ಟರೀಸ್)

|

ಂUಣ (ಪೋಸಲೈನ್)

|

ಕಲ್ಲುಮqP 

 

|

ಮೃದ್ವಸ್ತುಗಳು (ಅರ್ತನ್‍ವೇg)

 

|

mgಕೋಟ ಮತ್ತು

ಮಜೋಲಿಕ ಮೃತ್ಪ್ರತಿಮೆಗಳು, ಇತ್ಯಾದಿ.

ಕೃತಕ ಕಾರ್ಬೊgಂqಂ

ಉಚ್ಚ ಮತ್ತು ನಿಮ್ನ

ಸಾಮಾನುಗಳು

    

ತಾಪzsgಗಳು

ಕರ್ಷಣದ ದ್ಯುನ್ನಿ

(ಸ್ಟೋನ್‍ವೇರ್)

    

ಮ್ಯಾಗ್ನಸೈm v.

ರೋzsPಗಳು,

ಮqP ಕುಡಿಕೆಗಳು,

ಮqP ಕುಡಿಕೆಗಳು,

  

ಕ್ರೋಮೈಟ್ ತಾ.

ದಿನಬಳಕೆಯ ಪಿಂಗಾಣ

ಆಮ್ಲ ಭರಣಿಗಳು

ಗೋಡಿಬಿಲ್ಲೆಗಳು,

  

Pಯನೈm v.

ಸಾಮಾನುಗಳು

ಇತ್ಯಾದಿ.

ಪಾಕೀಜು ಪಾತ್ರೆಗಳು

  

ರಿhರ್ಕಾನ್ ತಾ.

ಂUಣಯ ಪಾಕಿಜ

  

ಇತ್ಯಾದಿ.

  

ಅಲ್ಯೂಮಿನ v.

ಜೇಡಿಮಣ್ಣು v.

ಸಾಮಾನುಗಳು (ಸ್ಯಾನಿಟರಿ ವೇರ್),

      

ಸಿಲೊಸೆಲ್ ತಾ.

ರಾಸಾಯನಿP ಂUಣ,

      

ಸಿಲ್ಲಿಮನೈm v.

ಉನ್ನತಾವೃತ್ತಿಯ

      

ಸಿಲಿಕಾ ತಾ.

ಪರಾವೈದ್ಯುvಗಳು

      

ತೋರಿಯಂ

(ಹೈ ಫ್ರೀಕ್ವೆನಿಡೈ ಎಲೆಕ್ಟ್ರಿಕ್ಸ್).

      

ಮತ್ತು ಸರಿಯಂ v. ಎಲೆಕ್ಟ್ರಕ್ಸ್).

        

ಡೋಲೋಮೈm v.

        

 

ಚಕ್ರ ಮತ್ತು ಗೂಟ (ಜಿಗ್ಗರ್ ಅಂಡ್ ಜಾಲಿಂಗ್). ಇಲ್ಲಿ ಮುದ್ದೆಯನ್ನು ಗಾಳಿ ತೆಗೆದೋ ತೆಗೆಯದೆಯೋ ಉಪಯೋಗಿಸಬಹುದು. ಈ ವಿಧಾನ ತಯಾರು ಮಾಡುವವನ ಕರಕೌಶಲವನ್ನು ಅವಲಂಬಿಸಿದೆ.

 2 ಎರಕ ಹುಯ್ಯುವ ವಿಧಾನ: ಇದರಲ್ಲಿ ದ್ರವರೂಪದಲ್ಲಿರುವ ಮೂಲ ವಸ್ತುವನ್ನು ಗಾಳಿ ತೆಗೆದೋ ತೆಗೆಯದೆಯೋ ಉಪಯೋಗಿಸಬಹುದು. ಇಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸಿನ ಎರಕದ ಅಚ್ಚು ಬೇಕಾಗುತ್ತದೆ. ಈ ವಿಧಾನದಲ್ಲಿ ಬೇರೆ ವಿಧಾನಗಳಲ್ಲಿ ರಚಿಸಲಾಗದ ಸಂಕೀರ್ಣ ಆಕೃತಿಗಳನ್ನು ರಚಿಸಬಹುದು. ಟೀ ಕೆಟಲುಗಳನ್ನು ಈ ವಿಧಾನದಿಂದ ನಿರ್ಮಿಸುತ್ತಾರೆ.

 3 ಒಣಒತ್ತಡ ವಿಧಾನ: ಇದರಲ್ಲಿ ಉಕ್ಕು ಅಥವಾ ಮಿಶ್ರಲೋಹದ ಅಚ್ಚುಗಳನ್ನು ಉಪಯೋಗಿಸುತ್ತಾರೆ. ಅವುಗಳಲ್ಲಿ ದೂಳಿನಂತಿರುವ ಮೂಲದ್ರವ್ಯವನ್ನು ಹಾಕಿ ಒಂದು ಒತ್ತುಯಂತ್ರದ ಮೂಲಕ ಒತ್ತುತ್ತಾರೆ. ವಿದ್ಯುನ್ನಿರೋಧಕ ವಸ್ತುಗಳು, ಗೋಡೆಬಿಲ್ಲೆಗಳುಮುಂತಾದವನ್ನು ಈ ವಿಧಾನದಿಂದ ತಯಾರಿಸಬಹುದು. ಮೂಲ ಸಾಮಗ್ರಿಗಳನ್ನು ಬೆರೆಸಲಾಗುತ್ತದೆ. ಹೀಗೆ ಮಾಡುವುದರಿಂದ ತಯಾರಿಕೆಯ ಕಾಲದಲ್ಲಿ ಸಾಮಗ್ರಿಗಳ ಅಪವ್ಯಯ ತಪ್ಪುತ್ತದೆ.

 ಜೇಡಿಮಣ್ಣಿನ ಪರೀಕ್ಷೆ: ಕುಂಭಕಲಾವಸ್ತುಗಳನ್ನು ತಯಾರಿಸಲು ಬೇಕಾದ ಜೀಡಿಮಣ್ಣನ್ನು ಈ ಕೆಳಗಿನಂತೆ ಪರೀಕ್ಷಿಸುತ್ತಾರೆ: 1 ಜೇಡಿಮಣ್ಣಿನ ಬಣ್ಣ, 2 ಸ್ಪರ್ಶಕ್ಕೆ ಮೃದತ್ವ, 3 ಪರಿಷ್ಕರಣ ಪರಿಶೀಲನೆ (ಸ್ವಲ್ಪ ಮಣ್ಣನ್ನು ಆಯ್ದು ಅದನ್ನು ತೊಳೆದು ಮಣ್ಣಿನ ಬಣ್ಣವನ್ನು ಪರಿಶೀಲಿಸಬಹುದು.)

 ತೊಳೆದು ಜೀಡಿಮಣ್ಣನ್ನು ಎರಡು ಉಷ್ಣತೆಗಳಿಗೆ, ಎಂದರೆ 1250 ಸೆಂ. ಮತ್ತು 1450 ಸೆಂ. ಒಡ್ಡಲಾಗುವುದು. ಮಣ್ಣನ್ನು ಸುಟ್ಟ ತರುವಾಯ ಅದರ ಬಣ್ಣವನ್ನೂ ಸರಂಧ್ರತೆಯನ್ನೂ ಗಮನಿಸಲಾಗುತ್ತದೆ. ಇಂಥ ಪರಿಶೀಲನೆಯಿಂದ ಆ ಜೇಡಿಮಣ್ಣಿನಿಂದ ತಯಾರಿಸಬಹುದಾದ ಕುಂಭಕಲಾ ವಸ್ತುಗಳನ್ನು ಪೂರ್ವಾಭಾವಿಯಾಗಿ ನಿರ್ಧರಿಸಬಹುದು. ಒಂದು ವೇಳೆ, ಜೇಡಿಮಣ್ಣು ತೀರ ಕನಿಷ್ಠ ದರ್ಜೆಯದು ಎಂದು ಪರಿಶೀಲನೆಯಲ್ಲಿ ತಿಳಿದುಬಂದರೆ ಅದನ್ನು ಇತರ ಮಣ್ಣುಗಳೊಡನೆ ಸೂಕ್ತವಾಗಿ ಬೆರೆಸಿ ಯುಕ್ತ ವಸ್ತುಗಳನ್ನು ತಯಾರಿಸಲು ಈ ಮಿಶ್ರಣವನ್ನು ಕಚ್ಚಾ ಸಾಮಗ್ರಿಯಾಗಿ ಬಳಸಬಹುದು.

 ವಿದ್ಯುದ್ರೋಧಿ ವಸ್ತುಗಳಾಗಿ ಉಪಯೋಗ: ವಿದ್ಯುದ್ರೋಧಿ ವಸ್ತುಗಳಾಗಿ (ಇನ್ಸುಲೇಟರ್ಸ್) ಕುಂಭಕಲಾ ಸಾಮಗ್ರಿಗಳಿಗೆ ವಿಪುಲವಾದ ಉಪಯೋಗಗಳಿವೆ. ತಂತಿಗಳ ಮೂಲಕ ರವಾನಿಸಬೇಕಾದ ವಿದ್ಯುಚ್ಚಕ್ತಿಯ ವೋಲ್ಟೇಜು ಹಾಗೂ ಪರಿಸರದ ಹವಾ ಪರಿಸ್ಧಿತಿಗಳನ್ನು ಅವಲಂಬಿಸಿ ವಿದ್ಯುದ್ರೋಧವಸ್ತುಗಳ ರಚನೆಯಲ್ಲಿ ವ್ಯತ್ಯಾಸಗಳಾಗುತ್ತವೆ. ಮೂರು ವಿದ್ಯುದ್ರೋಧಕಳಿವೆ (i) ಪಿನ್ ಮಾದರಿಯ ವಿದ್ಯುದ್ರೋಧಕ: (ii) ಕೊಂಡಿ (ಕ್ಯಾಕಲ್) ವಿದ್ಯುದ್ರೋಧಕ, (iii) ತೂಗು (ಸಸ್ಪೆನ್ಷನ್) ವಿದ್ಯುದ್ರೋಧಕ. ಇವನ್ನು ತಯಾರಿಸಲು ಸಾಮಾನ್ಯವಾಗಿ ಉಪಯೋಗಿಸುವ ದ್ರವ್ಯಗಳೆಂದರೆ ಪಿಂಗಾಣಿ ಮತ್ತು ಗಾಜು. ಪಿಂಗಾಣಿ ವಿದ್ಯುದ್ರೋಧಕಗಳ ಬಳಕೆಯೇ ಹೆಚ್ಚು. ವಾತಾವರಣದಿಂದ ಇವುಗಳ ಮೇಲೆ ಆಗುವ ಪ್ರಭಾವ ಬಲು ಕಡಿಮೆ ಇರುವುದೊಂದು ವಿಶೇಷ ಅನುಕೂಲ. ಒಂದು ವಿದ್ಯುದ್ರೋಧಕಗಳ ತಯಾರಿಸುವ ಮೊದಲು ಈ ಕೆಳಗಿನ ಅಂಶಗಳನ್ನು ಸಾಮಾನ್ಯವಾಗಿ ಪರಾಂಬರಿಸುತ್ತಾರೆ (i) ಒಣಫ್ಲಾಷ್ ಓವರ್ ವೋಲ್ಟೇಜ್, (ii) ಒದ್ದೆ ಫ್ಲಾಷ್ ಓವರ್ ವೋಲ್ಟೇಜ್, (iii) ತಂತಿಯ ವೋಲ್ಟೇಜ್, (iv) ಸ್ರವಣದೂರ (ಲೀಕೇಜ್ ಡಿಸ್ಪೆನ್ಸ್). (v) ಹವಾಪರಿಸ್ಥಿತಿಗಳು. (vi) ವಿದ್ಯುದ್ಯಾಂತ್ರಿಕ ಸಾಮಥ್ರ್ಯ, (vii) ಆಘಾತಸಾಮಥ್ರ್ಯ (ಇಂಪ್ಯಾಕ್ಟ್ ಸ್ಪ್ರೆಂತ್).

 ಉಚ್ಚಕರ್ಷಣ (ಹೈಟೆನ್ಷನ್) ಪಿಂಗಾಣಿಯ ಗುಣಗಳನ್ನು ಮುಂದಿನ ಯಾದಿಯಲ್ಲಿ ಬರೆದಿದೆ.

 

ಸಾಪೇಕ್ಷ ಸಾಂದ್ರತೆ  ... 2.3-2.5

ಮೆರುಗಿನದರ ಕರ್ಷಣ ... 300-500 ಕೆಜಿ/ಸೆಂಮೀ.2

ಮೆರುಗಿಲ್ಲದುದರ ಕರ್ಷಣ ... 240-320 ಕೆಜಿ/ಸೆಂಮೀ2

ಮೆರುಗಿನದರ ಸಂಪೀಡನ ... 4000-5500 ಕೆಜಿ/ಸೆಂಮೀ2

ಮೆರುಗಿಲ್ಲದುದರ ಸಂಪೀಡನ ... 4000-4500 ಕೆಜಿ/ಸೆಂಮೀ2

ಮೋ ಮಾನಕದಲ್ಲಿ ಗಡುಸುತನ ... 7-8

ಆಮ್ಲ ನಿರೋಧಬಲ ... ಹೈಡ್ರೋಫ್ಲೀರಿಕ್ ಆಮ್ಲ ಒಂದರ ವಿನಾ ಮಿಕ್ಕ ಎಲ್ಲ ಆಮ್ಲಗಳನ್ನು ತಡೆದುಕೊಳ್ಳಬಲ್ಲುದು.

 ಮೇಲಿನ ನಿರೂಪಣೆಯಿಂದ ಪಿಂಗಾಣಿಯು ಕರ್ಷಣದಲ್ಲಿ ನಿಮ್ಮ ಮತ್ತು ಸಂಪೀಡನದಲ್ಲಿ ಉಚ್ಚ ಸಾಮಥ್ರ್ಯದ್ದು ಎಂದು ತಿಳಿಯುತ್ತದೆ. ಪ್ಲಾಸ್ಟಿಕ್ ಸ್ಧಿತಿಯಿಂದ ದಗ್ಧಸ್ಧಿತಿಗೆ ಪಿಂಗಾಣಿಯನ್ನು ರೂಪಾಂತರಿಸುವಾಗ ಅದು ಸರಿ ಸುಮಾರಾಗಿ ತನ್ನ ಗಾತ್ರದ 18% ರಷ್ಟು ಕುಗ್ಗುತ್ತದೆ. ಇದಾದರೂ ಸಿದ್ಧ ವಸ್ತುವಿನ ಮೇಲೆ ಎಲ್ಲ ದಿಶೆಗಳಲ್ಲೂ ಸಮಪ್ರಮಾಣದಲ್ಲಿ ಆಗಿರುವುದೆಂದೇನೂ ಇಲ್ಲ. ಆದ್ದರಿಂದ ಪಿಂಗಾಣಿ ಪದಾರ್ಥಗಳ ಉದ್ದಗಳನ್ನು ಹೇಳುವಾಗ   3% ರಷ್ಟು ಗಾತ್ರ ವ್ಯತ್ಯಾಸಗಳಿಗೆ ಅನು ಮಾಡಿಕೊಡಬೇಕಾಗುತ್ತದೆ. 

(ಎನ್.ವಿ.ಆರ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ